ನಿನ್ನದು ತಪ್ಪು, ನನ್ನದು ತಪ್ಪು ಇರುವಾಗ
ಮಧ್ಯದಲ್ಲಿ ಕೋಪ, ತಾಪ, ದ್ವೇಷಗಳ್ಯಾಕೆ?
ಆತ ಇತ್ತ, ಬಂದು ಹೋದ,
ಕರೆಯಲಿಲ್ಲ, ತಡೆಯಲಿಲ್ಲ,
ಆದರೂ ಹೃದಯ
ಅಲ್ಲೋಲ ಕಲ್ಲೋಲ.
ನೀನು ಬರಲಿಲ್ಲ,
ಆತನನ್ನು ಕಳಿಸಿದ್ದು ಯಾಕೆ?
ಇಬ್ಬರ ನಡುವೆ
ಮೂರನೆಯವನು ಯಾಕೆ?
ನಾಲಿಗೆ ಮೆಲ್ಲಗೆ, ಮಾತು ಮಲ್ಲಿಗೆ,
ಇದ್ದರೂ ಸರಳ, ಮಾಡುವುದು ಮರುಳ.
ಆಹಾ! ಏನು ನಡತೆ, ಏನು ಉಡುಗೆ,
ಮುಖದಲ್ಲಿ ಮೌನ, ಮನ ಮೋಹನ.
ಇಂದ್ರನೋ, ಚಂದ್ರನೋ ಅನಬೇಕು ನಿನಗೆ,
ನೀನು ವಿಶಾಲ ಹೃದಯದ
ವಾರಧಿಯಲ್ಲವೇ?
❣️ ಪ್ರಿಯದರ್ಶಿ
Leave a Reply