ಇಬ್ಬರು ಆ ಗುಬ್ಬಚ್ಚಿಯನ್ನು ನೋಡಿದರು—
ತರಗತಿಯ ಹೊರಗೆ,
ರೆಕ್ಕೆ ಮುರಿದು,
ಹಾರಲಾರದೆ ಧಾರಾಶಾಯಿಯಾಗಿತ್ತು.
ಗುಬ್ಬಚ್ಚಿಯನ್ನು ನೋಡಿದ ಇಬ್ಬರೂ
ಒಬ್ಬರನ್ನೊಬ್ಬರು ನೋಡಿದರು…
ನಂತರ,
ಅದನ್ನು ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರಿಸಿದರು.
ಆದರೆ ಮುಂದೊಂದು ದಿನ…
ಅವಳಿಗೂ ಗೊತ್ತಿರಲಿಲ್ಲ—
ಆ ಮುರಿದ ರೆಕ್ಕೆಯ ಪಕ್ಷಿಯಂತೆ
ಆ ಹುಡುಗನ ಬದುಕೂ
ಒಂದು ದಿನ ನಿಂತುಹೋಗಬಹುದು ಎಂದು…!
ಆ ಪಕ್ಷಿಯಂತೆ,
ಆ ಹುಡುಗನೂ
ತನ್ನ ಬದುಕಿನ ನೋವಿನಿಂದ
ಮತ್ತೆ ಏಳಲೇ ಇಲ್ಲ…
ಅವಳು ಪಟ್ಟ ಶ್ರಮದ ಫಲ,
ಅವಳ ಸಾಧನೆಯ ಕಥೆಯಾಗಿ
ಇಡೀ ಪ್ರಪಂಚಕ್ಕೇ ತಿಳಿಯಿತು.
ಆದರೆ—
ಒಮ್ಮೆ ಅವಳೊಂದಿಗೆ ನಿಂತಿದ್ದ
ಆ ಹುಡುಗನಿಗೆ ಮಾತ್ರ
ಎಲ್ಲವೂ ಅಪರಿಚಿತವಾಗಿಯೇ ಉಳಿಯಿತು…
ತನ್ನದೇ ಕನಸುಗಳಿಂದ ದೂರವಾಗಿ,
ತನ್ನ ಸುತ್ತ ಏನಾಗುತ್ತಿದೆ ಎಂಬುದನ್ನೂ ಅರಿಯದೆ,
ನೋವಿನ ಬೇರುಗಳು ನೆಲದೊಳಗೆ ಹುದುಗಿ,
ಒಂದು ಮೌನ ವೃಕ್ಷದಂತೆ
ಉಳಿದುಹೋದ…!
❣️ಪ್ರಿಯದರ್ಶಿ
Leave a Reply