ಮೌನ ಅರಳಿ ಮಾತಾದಾಗ

ಹಣ್ಣುಗಳಿಂದ ತುಂಬಿದ ಮಾವಿನ ಮರಕ್ಕೆ
ಯಾರೋ ಬರ್ತಾರೆ ಕಲ್ಲೆಸೆತಾರೆ…
ತಮಗೆ ಸಿಕ್ಕಿ ಹಣ್ಣು ತೆಗೆದು ಹೋಗುತ್ತಾರೆ
ಮೌನಿ ವೃಕ್ಷ ಮೌನವಾಗಿ ಉಳಿದು
ಪರೋಪಕಾರದಲ್ಲಿ ಪರಮಾನಂದ ಪಡೆಯುವುದು.
ಹಾಗೆಯೇ ನಮ್ಮ ಬದುಕು ಕೂಡ ಆ ಮೌನಿ ವೃಕ್ಷದಂತೆ
ನಮ್ಮನ್ನು ತುಳಿದವರು ಶಿಖರದ ತುದಿ ತಲುಪಿದರೆ
ನಿಂತಲ್ಲೇ ನಿಂತೇವೆ ನಾವು ತುಳಿಸಿಕೊಂಡವರು
ಆದರು ನಮಗೆ ನೋವಿಲ್ಲ ಮನಸಿನಲ್ಲಿ ಮತ್ಸರವಿಲ್ಲ
ಪರೋಪಕಾರದಲ್ಲಿ ಪರಮಾನಂದ ಪಡೆಯುವುದೇ
ಪಾಪದ ಜೀವಿಯ ಪಾದದ ಹೆಜ್ಜೆಗುರುತುಗಳು
ನೆನಪಾಗಿ ಉಳಿದಿವೆ ಪ್ರತಿ ಮನಸುಗಳಲ್ಲಿ.

❣️ಪ್ರಿಯದರ್ಶಿ

Comments

Leave a Reply