ಮೌನ ಅರಳಿ ಮಾತಾದಾಗ

ಮೊದಲು ಅವರು ನಿಂತುಕೊಂಡರು,
ನಂತರ ಅವರು ತಿರುಗಾಡಿದರು.
ತಿರುಕನಂತೆ ತಿರುಗಿ ಮತ್ತೆ ಬಂದರು,
ಮರಳಿ ಬಂದು ನಿಂತುಕೊಂಡರು.

ಆಯಾಸಕ್ಕೆ ನೀರು ಕುಡಿದರು,
ದಣಿದು ನೆಲದ ಮೇಲೆ ಕುಳಿತುಕೊಂಡರು.

ಅವರ ಮುಖಭಾವ ನೋಡಿದರೆ
ಸ್ಪಷ್ಟವಾಗಿತ್ತು—
ಉದ್ಯೋಗಕ್ಕಾಗಿ
ಅಲೆದಾಟ ಅವರದು ಎಂದು.

ಯುವಕರಿಗೆ ಉದ್ಯೋಗ ಇಲ್ಲವೋ,
ಅಥವಾ
ಉದ್ಯೋಗಕ್ಕೆ ಯುವಕರಿಲ್ಲವೋ?

ಉದ್ಯೋಗ ಮತ್ತು ಯುವಕರ ನಡುವೆ
Communication gap ಅಂತೂ
ಚೀನಾದ ಮಹಾ ಗೋಡೆಯಂತೆ
ತಡೆಗೋಡೆಯಾಗಿ ನಿಂತಿದೆ.

❣️ಪ್ರಿಯದರ್ಶಿ

Comments

Leave a Reply